ನಟಿ ಪವಿತ್ರಾ ಜಯರಾಮ್ ಅಂತ್ಯ ಸಂಸ್ಕಾರವನ್ನು ಮಂಡ್ಯದಲ್ಲಿ ಮಾಡಲಾಗಿದೆ. ‘ಹಲವು ವರ್ಷಗಳ ಕಾಲ ಅವರ ಜೊತೆ ಕೆಲಸ ಮಾಡಿದ್ದೇನೆ. ಮೂರು ದಿನಗಳ ಮುನ್ನ ಅವರೊಂದಿಗೆ ಮಾತನಾಡಿದ್ದೆ. ಮತ್ತೆ ಮೇ 15ರಿಂದ ಜೊತೆಯಲ್ಲಿ ಶೂಟಿಂಗ್ ಮಾಡಬೇಕಿತ್ತು. ಅಷ್ಟರಲ್ಲಿ ಈ ರೀತಿ ಆಗಿದೆ. ಅವರ ನಿಧನದಿಂದ ತುಂಬ ನೋವಾಗಿದೆ’ ಎಂದು ಕಿರುತೆರೆ ನಟ ಚಂದು ಗೌಡ ಹೇಳಿದ್ದಾರೆ.