ಅಂಗಡಿಗೆ ಬಟ್ಟೆ ಖರೀದಿ ಮಾಡಲು ಗ್ರಾಹಕರು ಬಂದಿದ್ದ ವೇಳೆ ಅವರಿಗೆ ಬಟ್ಟೆಗಳನ್ನು ತೋರಿಸುತ್ತಲೇ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿರುವ ಎನ್ಆರ್ ಸಾರಿ ಸೆಂಟರ್ನಲ್ಲಿ ಸಂಭವಿಸಿದೆ. ಬಟ್ಟೆ ತೋರಿಸುತ್ತಿದ್ದಾಗ ಕ್ಷಣಮಾತ್ರದಲ್ಲಿಯೇ ಎದೆನೋವು ಕಾಣಿಸಿಕೊಂಡು ಕೆಳಗೆ ಬಿದ್ದ ಸಿಬ್ಬಂದಿ ಬವರ್ ಸಿಂಗ್ರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.