ಮಾಸ್ತಿ, ಜಡೇಶ್​, ಸೂರಜ್​ಗೆ ಕಾರು ಉಡುಗೊರೆ; ಸ್ಟಾರ್ಟ್​ ಮಾಡಿ ಹಾರೈಸಿದ ದರ್ಶನ್​

ನಟ ದರ್ಶನ್​ ಅವರು ‘ಕಾಟೇರ’ ಸಿನಿಮಾದಿಂದ ಭರ್ಜರಿ ಯಶಸ್ಸು ಕಂಡರು. ಅವರ ಜೊತೆಗೆ ಚಿತ್ರತಂಡದಲ್ಲಿ ಕೆಲಸ ಮಾಡಿದ ಅನೇಕರಿಗೆ ಗೆಲುವು ಸಿಕ್ಕಿತು. ಈ ಸಿನಿಮಾದ ಪರದೆ ಹಿಂದೆ ಕೆಲಸ ಮಾಡಿದ ತಂತ್ರಜ್ಞರ ಬೆನ್ನುತಟ್ಟುವ ಕೆಲಸ ಇಂದು ಆಗಿದೆ. ಹೌದು, ಕಥೆ ಬರೆದ ಜಡೇಶ್​ ಕುಮಾರ್​, ಸಂಭಾಷಣೆ ಬರೆದ ಮಾಸ್ತಿ ಹಾಗೂ ನಟ ಸೂರಜ್​ ಅವರಿಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಹೊಸ ಕಾರು ಕೊಡಿಸಿದ್ದಾರೆ. ಇಂದು (ಮೇ 2) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ನಂತರ ಈ ಮೂವರಿಗೆ ಕಾರು ಗಿಫ್ಟ್​ ನೀಡಲಾಯಿತು. ಮಾಸ್ತಿ, ಜಡೇಶ್​ ಮತ್ತು ಸೂರಜ್​ ಅವರ ಹೊಸ ಕಾರನ್ನು ದರ್ಶನ್​ ಅವರು ಸ್ಟಾರ್ಟ್​ ಮಾಡಿದ್ದಾರೆ. ಕೈ ನೋವಿನ ನಡುವೆಯೂ ಅವರು ಕಾರು ಆನ್​ ಮಾಡಿ ಶುಭ ಕೋರಿದ್ದಾರೆ. 2023ರ ಡಿಸೆಂಬರ್​ 29ರಂದು ಬಿಡುಗಡೆ ಆದ ‘ಕಾಟೇರ’ ಸಿನಿಮಾ 100 ದಿನಗಳನ್ನು ಪೂರೈಸಿದೆ. ಆ ಸಂಭ್ರಮವನ್ನು ಈ ರೀತಿಯಲ್ಲಿ ಚಿತ್ರತಂಡ ಸೆಲೆಬ್ರೇಟ್ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ತರುಣ್​ ಸುಧೀರ್​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಹಾಜರಿದ್ದರು.