ಮೈಸೂರಲ್ಲಿ ಮತದಾನದ ಪ್ರಮಾಣ ಹೆಚ್ಚಿಸೋಕೆ ವಿನೂತನ ಪ್ರಯತ್ನ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಆರಂಭಕ್ಕೆ ದಿನಗಣನೆ ಶುರುವಾಗಿದೆ. ನಾಳೆ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿರುವ ಮತದಾನ ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದೆ. ಮೈಸೂರಿನಲ್ಲಿ ಮತದಾನ ಜಾಗೃತಿಗಾಗಿ ಚಿಕ್ಕ ಗಡಿಯಾರ ವೃತ್ತದ ಬಳಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೊದಲು ಮತದಾನ ಮಾಡಿದ 2000 ಜನರಿಗೆ ವಾಸವಿ ಸೇವಾ ಟ್ರಸ್ಟ್​​​​ನಿಂದ ಉಚಿತ ಪಡಿತರ ವಿತರಣೆ ಮಾಡಲಿದ್ದಾರೆ.