ಬೆಂಗಳೂರಿನಲ್ಲಿ ಗುರುವಾರ (ಅ.26) ‘ಟಗರು ಪಲ್ಯ’ ಸಿನಿಮಾದ ಪ್ರೀಮಿಯರ್ ಶೋ ನಡೆಯಿತು. ಅದರಲ್ಲಿ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಭಾಗಿ ಆಗಿದ್ದರು. ಸಿನಿಮಾ ನೋಡಿದ ಬಳಿಕ ಎಲ್ಲರೂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅಮೃತಾ ಪ್ರೇಮ್, ನಾಗಭೂಷಣ್, ರಂಗಾಯಣ ರಘು, ತಾರಾ ಮುಂತಾದವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಡಾಲಿ ಧನಂಜಯ್ ನಿರ್ಮಾಣ ಮಾಡಿದ್ದು, ಉಮೇಶ್ ಕೆ. ಕೃಪ ನಿರ್ದೇಶನ ಮಾಡಿದ್ದಾರೆ. ಅಮೃತಾ ಪ್ರೇಮ್ ಅವರಿಗೆ ಇದು ಚೊಚ್ಚಲ ಸಿನಿಮಾ. ಇದರಲ್ಲಿ ಅಪ್ಪಟ ಗ್ರಾಮೀಣ ಸೊಗಡಿನ ಮತ್ತು ಕನ್ನಡದ ಮಣ್ಣಿನ ಕಹಾನಿ ಇದೆ. ಹಾಗಾಗಿ ಸಿನಿಮಾ ನೋಡಿದ ಬಳಿಕ ಹಿರಿಯ ನಟಿ ಶ್ರುತಿ ಅವರಿಗೆ ‘ಕಾಂತಾರ’, ‘ಕೆಜಿಎಫ್ 2’ ಸಿನಿಮಾಗಳ ನೆನಪಾಗಿದೆ. ಅಮೃತಾ ಅಭಿನಯಕ್ಕೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.