ಮಹಾಶಿವರಾತ್ರಿ ಬಂತಂದ್ರೆ ಸಾಕು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಸರ್ವಾಲಂಕೃತವಾದ ಶಿವನನ್ನು ನೋಡುವುದೇ ಒಂದು ಭಾಗ್ಯ. ಇನ್ನು ಮೈಸೂರಿನ ಅರಮನೆಯಲ್ಲಿರುವ ತ್ರಿನಯನೇಶ್ವರ ದೇವಸ್ಥಾನದಲ್ಲಿ ಶಿವ ಲಿಂಗವನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಯಾಕೆ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ. ಫಳ ಫಳ ಹೊಳೆಯುತ್ತಿರುವ ಶಿವಲಿಂಗದ ಮುಖವಾಡ. ಇದನ್ನು ನೋಡ್ತಾ ಇದ್ರೆ ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸದೆ ಇರಲಾರದು. ಇಂತಹ ಅದ್ಬುತವಾದ ಶಿವಲಿಂಗದ ಮುಖವಾಡವನ್ನು ನೋಡುವ ಸೌಭಾಗ್ಯ ಸಿಗುವುದು ಮೈಸೂರಿನ ಅರಮನೆಯಲ್ಲಿರುವ ತ್ರಿನೇತ್ರೇಶ್ವರ ದೇವಸ್ಥಾನದಲ್ಲಿ ಮಾತ್ರ. ಅದೂ ವರ್ಷಕ್ಕೆ ಒಮ್ಮೆ ಮಾತ್ರ ಮಹಾಶಿವರಾತ್ರಿ ಹಬ್ಬದಲ್ಲಿ. ಹೌದು ಮಹಾಶಿವರಾತ್ರಿ ಹಬ್ಬದಂದು ಮಾತ್ರ ಈ ಆಕರ್ಷಕವಾದ ಸುಮಾರು 11 ಕೆ.ಜಿ ತೂಕ ಇರುವ ಚಿನ್ನದ ಮುಖವಾಡವನ್ನು ಶಿವಲಿಂಗಕ್ಕೆ ಧಾರಣೆ ಮಾಡಲಾಗುತ್ತದೆ. ಸದ್ಯ ಈ ಚಿನ್ನದ ಮುಖವಾಡವನ್ನು ಅರಮನೆ ಆವರಣದಲ್ಲಿರುವ ತ್ರೀನೇಶ್ವರ ದೇವಾಲಯಕ್ಕೆ ತರಲಾಗಿದೆ.