ವಿಜಯಪುರ, ಆಗಸ್ಟ್ 17: ಬೃಹತ್ ಮೊಬೈಲ್ ಟವರ್ ಮೇಲೇರಿದ ಅರೆಬೆತ್ತಲೆ ಯುವಕನೊಬ್ಬ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸತೀಶ್ ಟವರ್ ಏರಿದ ಯುವಕನಾಗಿದ್ದಾನೆ. ಇತ್ತೀಚೆಗೆ ಸಿಂದಗಿ ತಾಲೂಕಿನ ಬಳಗಾನೂರ, ಚಾಂದಕವಟೆ ಗ್ರಾಮದಲ್ಲಿ ಟವರ್ ಮೇಲೇರಿ ಆತಂಕ ಸೃಷ್ಟಿಸಿದ್ದ ಯುವಕನೂ ಈತನೇ. ಅಂದು ಮತ್ತು ಇಂದು ಟವರ್ ಏರಿದ್ದು ಮಾತ್ರ ಗುಟ್ಕಾ ಹಾಗೂ ಮದ್ಯಕ್ಕಾಗಿ. ಸದ್ಯ ಜನರು ಗುಟ್ಕಾ, ಮದ್ಯ ನೀಡುವುದಾಗಿ ಹೇಳಿ ಯುವಕನನ್ನು ಕೆಳಗಿಳಿಸಿ ಆತನಿಗೆ ಬಟ್ಟೆ ತೊಡಿದ್ದಾರೆ. ಈತನ ಈ ದುಸ್ಸಾಹಕ್ಕೆ ಜನರು ಬೇಸತ್ತಿದ್ದಾರೆ.