ಏಪ್ರಿಲ್ ಮತ್ತು ಮೇ ನಲ್ಲಿ ಮಳೆಯಾದರೆ ಅಕಾಲಿಕ ಮಳೆ ಅನ್ನುತ್ತಾರೆ. ಇದರಿಂದ ಬೇಸಾಯಕ್ಕೆ ಹೇಳಿಕೊಳ್ಳುವ ಪ್ರಯೋಜನವಾಗದು. ಆದರೆ ಕಳೆದ ವರ್ಷ ಮಳೆಯ ಅಭಾವದಿಂದಾಗಿ ಕೆರೆಕುಂಟೆಗಳು, ಹಳ್ಳಕೊಳಗಳು ಬತ್ತಿ ಹೋಗಿವೆ. ನದಿಗಳೇ ಬತ್ತಿ ಹೋಗಿರುವಾಗ ಕೆರೆಕುಂಟೆ ಯಾವ ಲೆಕ್ಕ ಬಿಡಿ. ಹೇಳುವ ತಾತ್ಪರ್ಯವೇನೆಂದರೆ ಭೀಕರ ಬರದ ದಿನಗಳಲ್ಲಿ ಒಂದು ಚಿಕ್ಕ ಮಳೆಯಾದರೂ ಅದು ರೈತರಲ್ಲಿ ಹರ್ಷವನ್ನುಂಟು ಮಾಡುತ್ತದೆ.