ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಇಂದು ಮಳೆಯಾಗಿದ್ದು, ಹಾಲಾಡಿ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿದೆ. ಇದೇ ರಸ್ತೆ ಮೂಲಕ ಹೋಗುತ್ತಿದ್ದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ತಮ್ಮ ಬೆಂಬಲಿಗರೊಂದಿಗೆ ಮರ ತೆರವು ಕಾರ್ಯಕ್ಕೆ ಕೈಜೋಡಿಸಿದರು. ಈ ವೇಳೆ ಮತ್ತೊಂದು ಮರ ಬೀಳುವುದನ್ನು ಕಂಡ ಶಾಸಕರು ಮತ್ತು ಬೆಂಬಲಿಗರು ಪಕ್ಕಕ್ಕೆ ಓಡಿದ್ದಾರೆ.