ಸಿಗರೇಟ್ ಸೇದುತ್ತಿದ್ದಾಗ ವಿಷ್ಣುವರ್ಧನ್ ಕೈಲಿ ಸಿಕ್ಕಿ ಬಿದ್ದಿದ್ದ ಕಿಟ್ಟಿ

ವಿಷ್ಣುವರ್ಧನ್ ನಟನೆಯ ‘ವಿಷ್ಣು ಸೇನೆ’ ಸಿನಿಮಾದಲ್ಲಿ ಕಿಟ್ಟಿ ಅತಿಥಿ ಪಾತ್ರ ಮಾಡಿದ್ದರು. ಆ ದಿನದ ಘಟನೆಯನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ‘ವಿಷ್ಣು ಸೇನೆ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ನಾಗಣ್ಣ ಅವರು ಒಂದು ಪಾತ್ರಕ್ಕೆ ಅವಕಾಶ ಕೊಟ್ರು. ನನ್ನ ಪಾತ್ರ ಬರೋದು ಒಂದೇ ಸಿನ್. ಆದರೆ, ವಿಷ್ಣುವರ್ಧನ್ ಅವರ ಜೊತೆ ನಟಿಸೋಣ ಎಂದು ಒಪ್ಪಿಕೊಂಡೆ. ಶೂಟಿಂಗ್ ಸೆಟ್ಗೆ ಬಂದು ನಾನು ಸಿಗರೇಟ್ ಸೇದುತ್ತಿದೆ. ಆಗ ವಿಷ್ಣುವರ್ಧನ್ ಬಂದರು. ನಾನು ತಕ್ಷಣಕ್ಕೆ ಸಿಗರೇಟ್ ಬೀಸಾಕಿದೆ. ಕಿಟ್ಟಿ ಡೋಂಟ್ ವರಿ ಅಂದ್ರು. ಅವರು ಹೊಸ ಸಿಗರೇಟ್ ಕೊಡಿಸಿದರು’ ಎಂದಿದ್ದಾರೆ ಕಿಟ್ಟಿ.