ಬೆಂಗಳೂರು ನಗರದಲ್ಲಿ ಮಳೆ

ನೀವು ಗಮನಿಸಿರಬಹುದು, ಮಳೆಗಾಲ ಇನ್ನೇನು ಶುರುವಾಗುತ್ತದೆ ಅನ್ನುವಾಗ ಜನಪ್ರತಿನಿಧಿಗಳು ಸಿಟಿ ರೌಂಡ್ಸ್​ಗೆ ಹೋಗುತ್ತಾರೆ. ಅವರನ್ನು ಹಿಂಬಾಲಿಸುವ ಮಾಧ್ಯಮದವರಿಗೆ ರೈನೀ ಸೀಸನ್​ನಲ್ಲಿ ಸಿಟಿ ಹೇಗಿರಲಿದೆ ಅಂತ ರೋಸಿ ಪಿಕ್ಚರ್ ನೀಡುತ್ತಾರೆ! ಆಧುನಿಕತೆಯನ್ನು ಬಿಂಬಿಸುವ ಕಟ್ಟಡಗಳು ನಗರದಲ್ಲಿ ತಲೆಯೆತ್ತಿದರೆ ಮಾತ್ರ ಅಭಿವೃದ್ಧಿಯೇ ಅಂತ ಪ್ರಜ್ಞಾವಂತ ಬೆಂಗಳೂರಿಗರು ಮಳೆ ಸುರಿದಾಗೆಲ್ಲ ಕೇಳುತ್ತಾರೆ. ಉತ್ತರ ಯಾವಾಗ ಸಿಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ.