ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋ ನಡೆಸಿಕೊಡುವ ರೀತಿ ಎಂದರೆ ಅಭಿಮಾನಿಗಳಿಗೆ ಸಖತ್ ಇಷ್ಟ. ಸ್ಪರ್ಧಿಗಳು ತಪ್ಪು ಮಾಡಿದಾಗ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇನ್ನುಳಿದ ಸಂದರ್ಭದಲ್ಲಿ ಎಲ್ಲರನ್ನೂ ನಗಿಸುತ್ತಾ ಭರ್ಜರಿ ಮನರಂಜನೆ ನೀಡುತ್ತಾರೆ. ಈ ಶನಿವಾರದ ಎಪಿಸೋಡ್ ಸಖತ್ ಖಡಕ್ ಆಗಿತ್ತು. ಆದರೆ ಭಾನುವಾರದ ಸಂಚಿಕೆಯಲ್ಲಿ ಹೆಚ್ಚು ಫನ್ ಇರಲಿದೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಪ್ರೋಮೋ ಬಿಡುಗಡೆ ಮಾಡಲಾಗಿದೆ. ‘ಎಲ್ಲ ಸ್ಪರ್ಧಿಗಳಲ್ಲೂ ಒಂದೊಂದು ಇಂಟರೆಸ್ಟಿಂಗ್ ಕಥೆ ಇದೆ. ಅದನ್ನು ಮೂವೀ ಮಾಡಿದರೆ ವರ್ಕ್ ಆಗತ್ತೆ’ ಎಂದು ಹೇಳುವ ಮೂಲಕ ಸುದೀಪ್ ಅವರು ಕೆಲವು ಪೋಸ್ಟರ್ಗಳನ್ನು ತೋರಿಸಿದ್ದಾರೆ. ‘ಪಾಪ್ರೆಡ್ಡಿ ಪಾಳ್ಯ’, ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್’, ‘ಬೆಂಕಿಯ ಬಲೆ’ ಇತ್ಯಾದಿ ಸಿನಿಮಾಗಳ ಪೋಸ್ಟರ್ ತೋರಿಸಲಾಗಿದೆ. ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್’ ಸಿನಿಮಾಗೆ ತುಕಾಲಿ ಸಂತೋಷ್ ಹೀರೋ ಆಗಿದ್ದು, ಅವರಿಗೆ ಭಾಗ್ಯಶ್ರೀ ಮತ್ತು ಸಿರಿ ಹೀರೋಯಿನ್ ಆಗಿರುವ ರೀತಿಯಲ್ಲಿ ಪೋಸ್ಟರ್ ವಿನ್ಯಾಸ ಮಾಡಲಾಗಿದೆ.