ಸ್ಪಂದನಾ ನಿಧನದ ಬಳಿಕ ಹೇಗಿತ್ತು ವಿಜಯ್ ರಾಘವೇಂದ್ರ ಪರಿಸ್ಥಿತಿ? ಯಾರಿಗೂ ಬೇಡ ಈ ನೋವು

ನಟ ವಿಜಯ್​ ರಾಘವೇಂದ್ರ ಅವರು ಶೋಕದಲ್ಲಿ ಮುಳುಗಿದ್ದಾರೆ. ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಪ್ರೀತಿಸಿ ಮದುವೆಯಾದ ಪತ್ನಿ ಇನ್ನಿಲ್ಲ ಎಂದಾಗ ಆ ನೋವನ್ನು ಸಹಿಸಿಕೊಳ್ಳುವುದು ಅಸಾಧ್ಯ. ಆ ಸಂದರ್ಭದಲ್ಲಿ ವಿಜಯ್​ ರಾಘವೇಂದ್ರ ಅವರು ಅನುಭವಿಸಿದ ಸಂಕಟ ಅಷ್ಟಿಷ್ಟಲ್ಲ. ಪತ್ನಿಯ ನಿಧನದ ಬಳಿಕ ಅವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸುವ ವಿಡಿಯೋಗಳು ಈಗ ಲಭ್ಯವಾಗಿವೆ. ವಿದೇಶದಲ್ಲಿ ಮಡಿದ ಸ್ಪಂದನಾ ಅವರ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ವಿಜಯ್​ ರಾಘವೇಂದ್ರ ಕುಟುಂಬ ಸಾಕಷ್ಟು ಕಷ್ಟಪಡಬೇಕಾಯಿತು. ಆಗಸ್ಟ್​ 9ರಂದು ಸ್ಪಂದನಾ ಅವರ ಅಂತ್ಯಕ್ರಿಯೆ ನಡೆಯಿತು. ಆಗಸ್ಟ್​ 16ರಂದು ಉತ್ತರ ಕ್ರಿಯೆ ನೆರವೇರಿಸಲಾಯಿತು.