ನಟ ವಿಜಯ್ ರಾಘವೇಂದ್ರ ಅವರು ಶೋಕದಲ್ಲಿ ಮುಳುಗಿದ್ದಾರೆ. ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಪ್ರೀತಿಸಿ ಮದುವೆಯಾದ ಪತ್ನಿ ಇನ್ನಿಲ್ಲ ಎಂದಾಗ ಆ ನೋವನ್ನು ಸಹಿಸಿಕೊಳ್ಳುವುದು ಅಸಾಧ್ಯ. ಆ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಅವರು ಅನುಭವಿಸಿದ ಸಂಕಟ ಅಷ್ಟಿಷ್ಟಲ್ಲ. ಪತ್ನಿಯ ನಿಧನದ ಬಳಿಕ ಅವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸುವ ವಿಡಿಯೋಗಳು ಈಗ ಲಭ್ಯವಾಗಿವೆ. ವಿದೇಶದಲ್ಲಿ ಮಡಿದ ಸ್ಪಂದನಾ ಅವರ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ವಿಜಯ್ ರಾಘವೇಂದ್ರ ಕುಟುಂಬ ಸಾಕಷ್ಟು ಕಷ್ಟಪಡಬೇಕಾಯಿತು. ಆಗಸ್ಟ್ 9ರಂದು ಸ್ಪಂದನಾ ಅವರ ಅಂತ್ಯಕ್ರಿಯೆ ನಡೆಯಿತು. ಆಗಸ್ಟ್ 16ರಂದು ಉತ್ತರ ಕ್ರಿಯೆ ನೆರವೇರಿಸಲಾಯಿತು.