ರಸ್ತೆ ಬದಿಯ ಜಮೀನೊಂದರ ಬಾವಿಯಲ್ಲಿ ಬುಲೆಟ್ ಬೈಕ್​ ಪತ್ತೆ

ಚಿಕ್ಕಬಳ್ಳಾಪುರ ತಾಲೂಕಿನ ಹರಿಹರಪುರದ ಬಳಿ ರಸ್ತೆಬದಿಯ ಜಮೀನಿನ ಬಾವಿಯಲ್ಲಿ ಬುಲೆಟ್ ಬೈಕ್ ಪತ್ತೆಯಾಗಿದೆ. ತೋಟಕ್ಕೆ ನೀರು ಹಾಯಿಸಲು ಹೋದ ರೈತನಿಗೆ ಬೈಕ್ ಕಂಡುಬಂದಿದೆ. ಸ್ಥಳೀಯರು ಬಾವಿಯ ನೀರನ್ನು ಹೊರಗೆ ಹಾಕಿದ್ದಾರೆ. ಈ ಘಟನೆಯಿಂದ ಹಲವು ಅನುಮಾನಗಳು ಎದ್ದಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.