ಸ್ಮಶಾನದಲ್ಲಿ ನಿರ್ಮಿಸಿರುವ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿಯರು ಹೆರಿಗೆಗೆ ಬರುತ್ತಿಲ್ಲ

ಸ್ಮಶಾನ ಇದೆ ಎಂಬ ಕಾರಣಕ್ಕೆ ಗರ್ಭಿಣಿಯರು ಇಲ್ಲಿಗೆ ಹೆರಿಗೆಗೆ ಬರುತ್ತಿಲ್ಲ. ಹೊರರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಕೆಮ್ಮು ನೆಗಡಿ ಜ್ವರದಿಂದ ಬಳಲುವ ರೋಗಿಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಮಶಾನದಲ್ಲಿನ ಆಸ್ಪತ್ರೆಯಲ್ಲಿ ಮಗು ಜನಿಸಿದರೆ ಕೇಡಾಗುತ್ತೆ ಅನ್ನೋ ಕಾರಣಕ್ಕೆ ಗರ್ಭಿಣಿಯರು ಚಿಕಿತ್ಸೆಗೆ ಇಲ್ಲಿಗೆ ಬರುತ್ತಿಲ್ಲ. ಮಗುವಿನ ಮುಂದಿನ ಭವಿಷ್ಯ ಚೆನ್ನಾಗಿರೋದಿಲ್ಲ ಅನ್ನೋ ಕಾರಣಕ್ಕೆ ಮಹಿಳೆಯರು ಬರುತ್ತಿಲ್ಲ.