ಅಕ್ಕನ ಮಗ ಸಂಚಿತ್ ಸಿನಿಮಾಗೆ ‘ಜಿಮ್ಮಿ’ ಟೈಟಲ್ ಕೊಟ್ಟಿದ್ದು ಯಾರು? ವಿಶೇಷ ವ್ಯಕ್ತಿ ಬಗ್ಗೆ ಸುದೀಪ್ ಮಾತು

ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಮೊದಲ ಚಿತ್ರಕ್ಕೆ ‘ಜಿಮ್ಮಿ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಸಂಚಿತ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಹೀರೋ ಇಂಟ್ರೋಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ. ‘ಜಿಮ್ಮಿ’ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಸಿನಿಮಾದ ಟೈಟಲ್ ಅನೇಕರಿಗೆ ಇಷ್ಟವಾಗಿದೆ. ಈ ಟೈಟಲ್ ನೀಡಿದ್ದು ಯಾರು ಎನ್ನುವ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ. ಆ ವ್ಯಕ್ತಿಯನ್ನು ಹಾಡಿ ಹೊಗಳಿದ್ದಾರೆ ಸುದೀಪ್.