ತುಮಕೂರು, ಸೆಪ್ಟೆಂಬರ್ 16: ರಾಜಧಾನಿಗೆ ಬೆಂಗಳೂರಿಗೆ ಅಂಟಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಆಗಾಗ್ಗೆ ಮೌಢ್ಯಾಚರಣೆ ಢಾಳಾಗಿ ಕಂಡುಬರುತ್ತದೆ. ಅದರಲ್ಲು ಗೊಲ್ಲರಹಟ್ಟಿಗಳಲ್ಲಿ ಮೌಢ್ಯಾಚರಣೆ ಮುಂದುವರಿದಿದೆ. ತಾಜಾ ಆಗಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚಿಕ್ಕನೆಟ್ಟಗುಂಟೆ ಗ್ರಾಮದಲ್ಲಿ ಮತ್ತೊಂದು ಘಟನೆ ನಡೆದಿದೆ. ಗುಬ್ಬಿ ತಹಶೀಲ್ದಾರ್ ಆರತಿ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ತಂಡ ಮೌಢ್ಯಾಚರಣೆಯನ್ನು ಬಟಾಬಯಲಿಗೆ ತಂದಿದೆ. ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರನ್ನ ಗ್ರಾಮದಿಂದ ಹೊರಗಿಟ್ಟು ಮೌಢ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ.