ಬಾಗಲಕೋಟೆ, ಸೆ.25: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಚಕ್ರವರ್ತಿ ಸದಾಶಿವ ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ವೇಳೆ ಕೋಲೂರಿನ ಚಿಕ್ಕಯ್ಯ ಗುರುಬಸಯ್ಯ ಹಿರೇಮಠ ಸ್ವಾಮೀಜಿ ಸುಡುವ ಹುಗ್ಗಿಯನ್ನು ಕೈಯಿಂದ ತಟ್ಟೆ ತುಂಬಿದರು. ಭಕ್ತರಿಂದ ಜಯ ಘೋಷಗಳು ಮೊಳಗಿದವು. ಕುದಿಯುವ ಹುಗ್ಗಿ ಕೈಯಿಂದ ತೆಗೆದರೂ ಕೈ ಸುಡಲ್ಲ. ಇದೆಲ್ಲ ಶ್ರೀಗಳ ಪವಾಡ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.