ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಜೂನ್ 6 ರಂದು ಬಹು ಅದ್ಧೂರಿಯಾಗಿ ತಿರುಪತಿಯಲ್ಲಿ ನಡೆಯಿತು. ಹೆಚ್ಚುವರಿ ಅತಿಥಿಗಳಿಲ್ಲದೆ ಆದಿಪುರುಷ್ ಸಿನಿಮಾ ತಂಡದವರು ಮಾತ್ರವೇ ಪಾಲ್ಗೊಂಡಿದ್ದ ಈ ಇವೆಂಟ್ಗೆ ಪ್ರಭಾಸ್ ತಡವಾಗಿ ಎಂಟ್ರಿ ನೀಡಿದರಾದರೂ ಸಖತ್ ಖಡಕ್ ಆಗಿ ಎಂಟ್ರಿ ಕೊಟ್ಟರು.