ನದಿಗೆ ಬಿದ್ದಿದ್ದ ಟ್ಯಾಂಕರ್ ಹೊರಕ್ಕ, ಶಿರೂರು ಸುತ್ತಲಿನ ನಿವಾಸಿಗಳು ನಿರಾಳ

ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ 66 ರ ಮೇಲೆ ಭಾರೀ ಪ್ರಮಾಣದ ಮಣ್ಣ ಗುಡ್ಡೆಯಾಗಿದ್ದ ಕಾರಣ ವಾಹನ ಸಂಚಾರ ನಿಂತು ಹೋಗಿತ್ತು. ಒಂದು ಬದಿಯ ರಸ್ತೆ ಮೇಲಿನ ಮಣ್ಣನ್ನು ತೆರವು ಮಾಡಲಾಗಿದೆ. ಮತ್ತೊಂದು ಮಣ್ಣು ತೆರವುಗೊಳ್ಳಲು ಸಮಯ ಹಿಡಿಯಲಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ತೆರವು ಕಾರ್ಯಾಚರಣೆ ವಿಳಂಬಗೊಳ್ಳುತ್ತಿದೆ.