ಬಿಪಿಎಲ್ ಕಾರ್ಡ್ಗಳು ಎಪಿಎಲ್ ಅಂತ ಪರಿಗಣನೆಗೆ ಬಂದಿರೋದು ಬಡ ಕುಟುಂಬಗಳಲ್ಲಿ ಅತಂಕ ಹುಟ್ಟಿಸಿದೆ. ಅದು ಅವರನ್ನು ಹಲವು ಸೌಲಭ್ಯಗಳಿಂದ ವಂಚಿತವಾಗಿಸುತ್ತದೆ. ನಿಗದಿತ ಮಿತಿಗಿಂತ ಹೆಚ್ಚು ಆದಾಯ ಇರುವ ಕುಟುಂಬಗಳ ಬಿಪಿಎಲ್ ಕಾರ್ಡ್ಗಳನ್ನು ಮಾತ್ರ ಎಪಿಎಲ್ ಅಂತ ಘೋಷಿಸಲಾಗುತ್ತಿದೆ ಅಂತ ಸರ್ಕಾರ ಹೇಳುತ್ತಿದ್ದರೂ ಜನರಲ್ಲಿ ಅಸಮಾಧಾನ ಹುಟ್ಟಿಕೊಂಡಿದೆ.