ಈರುಳ್ಳಿ ದರ ಹೆಚ್ಚಿದ್ದಕ್ಕೆ ಹೆಣ್ಣುಮಕ್ಕಳು ಕಣ್ಣೀರು ಹಾಕುವಂತಾಗಿದೆ

ನಮಗೆ ಸರ್ಕಾರದ ಗ್ಯಾರಂಟಿಗಳು ಬೇಕಾಗಿಲ್ಲ, ಈರುಳ್ಳಿ ಬೆಲೆ ಕಡಿಮೆ ಆಗಲಿ. ಈರುಳ್ಳಿ ಬೆಲೆ ಏರಿಕೆಯಿಂದ ಅಡುಗೆ ಮಾಡಲು ಕಷ್ಟವಾಗುತ್ತಿದೆ ಎಂದು ಗೃಹಿಣಿ ಒಬ್ಬರು ತಮ್ಮ ಅಳಲು ತೊಡಿಕೊಂಡಿದ್ದಾರೆ. ಜಿಲ್ಲೆಯ ವಲ್ಲಭಭಾಯಿ ವೃತ್ತದ ಬಳಿಯ ತರಕಾರಿ ಮಾರುಕಟ್ಟೆ ಮಾತನಾಡಿದ ಅವರು, ಬಾಗಲಕೋಟೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಗೆ 70-80 ರೂ.ಏರಿದೆ. ಹಿಂದೆ ಟೊಮ್ಯಾಟೋ ಬೆಲೆ ಏರಿತ್ತು, ಈಗ ಈರುಳ್ಳಿ ಬೆಲೆ ಹೆಚ್ಚಾಗಿದೆ.