ಹದಗೆಟ್ಟಿದ ವರ್ತೂರು ಸಂತೋಷ್-ತನಿಷಾ ಫ್ರೆಂಡ್ಶಿಪ್; ಆಗ ಹೇಗಿದ್ರು, ಈಗ ಹೇಗಾಗಿದ್ದಾರೆ ನೋಡಿ..

ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಆದರೆ, ಈ ಫ್ರೆಂಡ್ಶಿಪ್ ಮುರಿದು ಬಿದ್ದಿದೆ. ‘ತನಿಷಾ ತುಂಬಾನೇ ಕೆಟ್ಟ ಆಟ ಆಡುತ್ತಾರೆ’ ಎಂದು ವರ್ತೂರು ಸಂತೋಷ್ ಅವರು ಓಪನ್ ಆಗಿ ಹೇಳಿದ್ದಾರೆ. ಅವರಿಬ್ಬರೂ ಮೊದಲಿನಷ್ಟು ಆಪ್ತವಾಗಿಲ್ಲ. ಮುಂದಿನ ದಿನಗಳಲ್ಲಿ ಫ್ರೆಂಡ್ಶಿಪ್ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಇಬ್ಬರ ಫ್ರೆಂಡ್ಶಿಪ್ ಮೊದಲು ಹೇಗಿತ್ತು, ಈಗ ಹೇಗಿದೆ ಎಂಬ ಬಗ್ಗೆ ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗಿದೆ. ‘ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ಶಿಪ್ ಉಳಿಯಲ್ಲ’ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.