ಅದರೆ ಮಾಧ್ಯಮದ ಪ್ರತಿನಿಧಿಗಳು ಛಲಬಿಡದ ತ್ರಿವಿಕ್ರಮನ ಹಾಗೆ, ಪೊಲೀಸ್ ವಾಹನಗಳನ್ನು ಹಿಂಬಾಲಿಸಿ ತಾಲ್ಲೂಕು ಆಸ್ಪತ್ರೆ ತಲುಪಿದರು. ಅಸ್ಪತ್ರೆಯ ಮುಖ್ಯದ್ವಾರದ ಬಳಿ ಅವರ ಶ್ರಮ ಸಾರ್ಥಕವಾಯಿತು. ವೈದ್ಯಕೀಯ ಚೆಕಪ್ ಸಲುವಾಗಿ ಒಳಗಡೆ ಹೋಗುವ ಮೊದಲು ದೇವರಾಜೇಗೌಡ ‘ಸತ್ಯಕ್ಕೆ ಜಯವಿದೆ’ ಅಂತ ಹೇಳುತ್ತಾ ವಿಕ್ಟರಿ ಸನ್ನೆ ತೋರಿದರು.