ಹಾಸನ: ಜನತಾ ದರ್ಶನ ಕಾರ್ಯಕ್ರಮದಲ್ಲಿ ಕಿತ್ತಾಡಿಕೊಂಡ ಶಿವಲಿಂಗೇಗೌಡ, ಹೆಚ್​​ಕೆ ಸುರೇಶ್

ಹಾಸನದಲ್ಲಿ ಇಂದು ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮದ್ಯದ ಅಂಗಡಿ ತೆರೆದ ವಿಚಾರವಾಗಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಮತ್ತು ಹೆಚ್​.ಕೆ.ಸುರೇಶ್ ಕಿತ್ತಾಡಿಕೊಂಡಿದ್ದಾರೆ. ಶಾಸಕರ ವಾಗ್ವಾದ ಕಂಡು ಸಚಿವ ಕೆಎನ್​ ರಾಜಣ್ಣ ಅವರು ಕಕ್ಕಾಬಿಕ್ಕಿಯಾದರು. ಬಳಿಕ ಮಧ್ಯಪ್ರವೇಶಿಸಿದ ಅಧಿಕಾರಿಗಳು ಶಾಸಕರನ್ನು ಸಮಾಧಾನಪಡಿಸಿದರು.