ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಬೆಂಗಳೂರುಗೆ ಬಂದು ಕಾಂಗ್ರೆಸ್ ಶಾಸಕರನ್ನು ಮಾತಾಡಿಸುತ್ತಿದ್ದಾರೆ. ಪರಮೇಶ್ವರ್ ಅವರಿನ್ನೂ ಸುರ್ಜೆವಾಲಾರನ್ನು ಭೇಟಿಯಾಗಿಲ್ಲ, ತನ್ನನ್ನು ಕರೆದರೆ ಹೋಗುತ್ತೇನೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಶಾಸಕರಲ್ಲಿರುವ ಗುಂಪುಗಾರಿಕೆ, ಅಸಮಾಧಾನ ಮತ್ತು ಭಿನ್ನಮತವನ್ನು ಪರಿಹರಿಸಲು, ಸುರ್ಜೆವಾಲಾ ನಗರಕ್ಕೆ ಆಗಮಿಸಿದ್ದಾರೆ.