ಚಿಕ್ಕಬಳ್ಳಾಪುರ: ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು ಬೆಂಕಿಗೆ ಆಹುತಿ

ಚಿಕ್ಕಬಳ್ಳಾಪುರ ತಾಲ್ಲೂಕಿನ ಗೋಪಿನಾಥ ಬೆಟ್ಟದ ದೇವಸ್ಥಾನದ ಬಳಿ ನಿಲ್ಲಿಸಿದ್ದ ಯಲಹಂಕದ ನರಸಿಂಹಮೂರ್ತಿ ಅವರ ಬ್ರೀಜಾ ಕಾರು ಹೊತ್ತಿ ಉರಿದಿದೆ. ದೇವರ ದರ್ಶನಕ್ಕೆ ಹೋಗಿದ್ದ ಅವರು ಹಿಂತಿರುಗಿ ಬಂದಾಗ ಕಾರು ಬೆಂಕಿಯಲ್ಲಿ ಸುಟ್ಟುಹೋಗಿರುವುದನ್ನು ಕಂಡಿದ್ದಾರೆ. ಕಾರಿನ ಬಾನೆಟ್‌ನಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.