ಮಂಡ್ಯದಲ್ಲಿ ಮೋದಿ ಕಾರ್ಯಕ್ರಮದ ಹಿನ್ನೆಲೆ ಮದುವೆ ಸಮಾರಂಭಕ್ಕೂ ತಟ್ಟಿದ ಬಿಸಿ

ಮಂಡ್ಯ ಜಿಲ್ಲೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಲಾಗಿದೆ. ಮೋದಿ ಕಾರ್ಯಕ್ರಮದಿಂದ ಮದುವೆ ಸಮಾರಂಭಕ್ಕೂ ಬಿಸಿ ತಟ್ಟಿದೆ. ಮೋದಿ ಕಾರ್ಯಕ್ರಮಕ್ಕೆ ಹೋಗುವ ಮಾರ್ಗ ಮಧ್ಯೆದಲ್ಲಿರೋ ಚಿಕ್ಕೇಗೌಡನ ಬಡಾವಣೆಯ ಕಲ್ಯಾಣ ಮಂಟಪದಲ್ಲಿ ಮೇಘನ ಎಂ ಗೌಡ ಹಾಗೂ ಸುನೀಲ್ ಎಂ ಗೌಡ ಮದುವೆ ಕಾರ್ಯಕ್ರಮ ನಿಶ್ಚಯವಾಗಿತ್ತು. 6 ತಿಂಗಳ ಹಿಂದೆ ಮದುವೆ ನಿಶ್ಚಯವಾಗಿದ್ದ ಮದುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ 3ಸಾವಿರ ಜನರಿಗೆ ಆಹ್ವಾನ‌ ನೀಡಲಾಗಿತ್ತು. ಆದ್ರೀಗ ಮೋದಿ ಆಗಮನದಿಂದಾಗಿ ಮದುವೆಗೆ ಆಗಮಿಸುವವರಿಗೆ ತೊಂದ್ರೆ ಉಂಟಾಗಿದೆ. ಮೋದಿ ಭದ್ರತೆ ಹಿನ್ನೆಲೆಯಲ್ಲಿ ಈಗ 500 ಜನ ಬರುವುದು ಕಷ್ಟವಾಗಿದೆ ಎಂದು ಟಿವಿ9 ಬಳಿ ವಧುವಿನ ತಂದೆ ನಾಗೇಶ್ ಅಳಲು ತೋಡಿಕೊಂಡಿದ್ದಾರೆ.