ಧನರಾಜ್ ಅವರು ಫಿನಾಲೆ ಟಿಕೆಟ್ ಪಡೆಯಬೇಕು ಎಂದು ಕಷ್ಟಪಟ್ಟು ಆಟ ಆಡಿದ್ದರು. ಗೌತಮಿ ಜಾದವ್ ಮತ್ತು ಉಗ್ರಂ ಮಂಜು ಜೊತೆ ಅವರು ಕೈ ಜೋಡಿಸಿದ್ದರು. ಆದರೆ ಕೊನೇ ಹಂತದಲ್ಲಿ ಗೌತಮಿ ಮತ್ತು ಮಂಜು ಸೇರಿ ಧನರಾಜ್ಗೆ ಫಿನಾಲೆ ಟಿಕೆಟ್ ಸಿಗದಂತೆ ಮಾಡಿದ್ದಾರೆ. ಈ ಸ್ಥಿತಿ ಬಂದಿದ್ದಕ್ಕೆ ಇನ್ನುಳಿದ ಸದಸ್ಯರು ಲೇವಡಿ ಮಾಡಿದ್ದಾರೆ.