ಭಾರತಕ್ಕೆ ಹೋಲಿಕೆ ಮಾಡಿದರೆ ಅಮೆರಿಕ ತಂತ್ರಜ್ಞಾನದಲ್ಲಿ ತುಂಬಾನೇ ಮುಂದುವರಿದೆ. ಅಲ್ಲಿ ಡ್ರೈವರ್ ಇಲ್ಲದ ಕಾರುಗಳು ಬಂದಿವೆ. ಚಾಲಕ ರಹಿತ ಕ್ಯಾಬ್ಗಳು ಅಮೆರಿಕದಲ್ಲಿವೆ. ಭಾರತದಿಂದ ತೆರಳಿದವರಿಗೆ ಇದು ಅಚ್ಚರಿ ಎನಿಸುತ್ತದೆ. ನಟ ಡಾಲಿ ಧನಂಜಯ್ ಸದ್ಯ ಅಮೆರಕದಲ್ಲಿದ್ದಾರೆ. ಅವರು ಡ್ರೈವರ್ ಇಲ್ಲದ ಕ್ಯಾಬ್ ಏರಿದ್ದಾರೆ. ಅದು ಹೋಗುವ ವೇಗ ನೋಡಿ ಡಾಲಿ ಅಚ್ಚರಿಗೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಟಗರು’ ಬಳಿಕ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.