ಪಂದ್ಯ ಮುಗಿದ ಬಳಿಕ ಹ್ಯಾಂಡ್‌ಶೇಕ್ ನೀಡುವ ವೇಳೆ ಕೊಹ್ಲಿ ನಗುತ್ತಲೇ ಶ್ರೇಯಸ್ ಬಳಿ ಮಾತನಾಡುತ್ತಿದ್ದರೆ, ಶ್ರೇಯಸ್ ಮಾತ್ರ ಕೋಪದಲ್ಲೇ ಪ್ರತಿಕ್ರಿಸಿದರು. ಕೊಹ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೆ, ಶ್ರೇಯಸ್ ಮಾತ್ರ ಕೊಹ್ಲಿ ಮಾತಿಗೆ ಮನ್ನಣೆಯನ್ನೇ ಕೊಡಲಿಲ್ಲ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಯ್ಯರ್ ವಿರುದ್ಧ ಗರಂ ಆಗಿದ್ದಾರೆ.