ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರದ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಈಗ ಅವರು ‘ಕಾಂತಾರ 2’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇಂದು (ಜುಲೈ 7) ಅವರ ಜನ್ಮದಿನ. ನಂದಿ ಲಿಂಕ್ ಗ್ರೌಂಡ್ನಲ್ಲಿ ರಿಷಬ್ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಇದಕ್ಕೆ ಸಕಲ ಸಿದ್ಧತೆ ನಡೆದಿದೆ. ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೂಡ ಇದೆ. ‘ಈಗಾಗಲೇ ರಿಷಬ್ 10 ಬಾರಿ ಕರೆ ಮಾಡಿದ್ದಾನೆ. ಆಡಂಬರ ಬೇಡ, ಸಣ್ಣ ವೇದಿಕೆ ಕೊಡಿ ಸಾಕು ನನಗೆ ಎನ್ನುತ್ತಿದ್ದಾನೆ. ಆದರೆ, ಫ್ಯಾನ್ಸ್ ಜೋರಾಗಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ’ ಎಂದು ಪ್ರಮೋದ್ ಶೆಟ್ಟಿ ಮಾಹಿತಿ ನೀಡಿದ್ದಾರೆ.