‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್

ನಟ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದು, ಆ ಕುರಿತು ನಟಿ ಸುಮಲತಾ ಅಂಬರೀಷ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್​ ಅವರನ್ನು ಸದ್ಯಕ್ಕೆ ಸುಮಲತಾ ಭೇಟಿ ಆಗಿಲ್ಲ. ವಿಜಯಲಕ್ಷ್ಮಿ ಜೊತೆ ತಾವು ಸಂಪರ್ಕದಲ್ಲಿ ಇರುವುದಾಗಿ ಸಮಲತಾ ತಿಳಿಸಿದ್ದಾರೆ. ‘ನಾವು ನೈತಿಕ ಬೆಂಬಲ ನೀಡುತ್ತೇವೆ. ದರ್ಶನ್​ಗೆ ಒಳ್ಳೆಯದು ಆಗಲಿ ಎಂಬ ನಿರೀಕ್ಷೆಯಲ್ಲಿ ನಾವು ಇದ್ದೇವೆ’ ಎಂದಿದ್ದಾರೆ ಸುಮಲತಾ ಅಂಬರೀಷ್.