ಬೆಂಗಳೂರು, ಆಗಸ್ಟ್ 28: ಸಾರ್ವಜನಿಕರು ಗೊತ್ತಿದ್ದೋ ಗೊತ್ತಿಲ್ಲದೆಯೋ ರೈಲು ಬರುತ್ತಿರುವಾಗಲೇ ಹಳಿ ದಾಟಲು ಹೋಗಿ ಜೀವಕ್ಕೆ ಕುತ್ತು ತರುವಂತಹ ಸನ್ನಿವೇಶಗಳು ಹಲವಾರು ನಡೆದಿವೆ. ಇದೀಗ ಬೆಂಗಳೂರು ನಗರದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ಮಹಿಳೆಯೊಬ್ಬರು ಹಳಿ ದಾಟುತ್ತಿದ್ದಾಗ ಗೂಡ್ಸ್ ರೈಲು ಬಂದಿದೆ. ಗಾಬರಿಗೊಂಡ ಮಹಿಳೆ ಕೂಡಲೇ ಹಳಿಯಲ್ಲಿ ಮಲಗುವ ಮೂಲಕ ಸಾವನ್ನು ಗೆದ್ದಿದ್ದಾರೆ.