ಸಂಸದ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಈಗ ಅಸ್ತಿತ್ವದಲ್ಲಿರುವ ಸರ್ಕಾರ ಒಂದು ಬಗೆಯ ಯು-ಟರ್ನ್ ಸರ್ಕಾರ, ಮುಡಾದಿಂದ ಪಡೆದ ಸೈಟುಗಳನ್ನು ವಾಪಸ್ಸು ನೀಡಲಾಯಿತು, ವಕ್ಫ್ ಬೋರ್ಡ್ ರೈತರಿಗೆ ನೀಡಿದ್ದ ನೋಟೀಸ್​ಗಳನ್ನು ವಾಪಸ್ಸು ಪಡೆಯಲಾಯಿತು, ಸರ್ಕಾರಿ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರಿಗೆ 4 ಪರ್ಸೆಂಟ್ ಮೀಸಲಾತಿ ಕಲ್ಪಿಸುವ ಯೋಜನೆ ಹಿಂತೆಗೆದುಕೊಳ್ಳಲಾಯಿತು ಮತ್ತು ಈಗ ಬಿಪಿಎಲ್ ಕಾರ್ಡ್​ಗಳನ್ನು ವಾಪಸ್ಸು ಪಡೆಯುವ ಕೆಲಸ ಜಾರಿಯಲ್ಲಿದೆ ಎಂದು ಬೊಮ್ಮಾಯಿ ಹೇಳಿದರು.