ಒಂದು ಸಂಕೀರ್ಣ ವಿಷಯವನ್ನು ಗುರೂಜಿ ಬಹಳ ಅರ್ಥಗರ್ಭಿತವಾಗಿ ವಿವರಿಸಿದರು. ದೆಹಲಿಯಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯ ಯಾರಿಗೆ ಗೊತ್ತಿಲ್ಲ? ದೀಪಾವಳಿ ಸಮಯದಲ್ಲಿ ಅದು ಮತ್ತಷ್ಟು ಹದಗೆಡುತ್ತದೆ. ಬಹಳಷ್ಟು ಜನಕ್ಕೆ ಗೊತ್ತಿರಲಾರದು, ಬೆಂಗಳೂರಿನ ಮಾನ್ಯತಾ ಟೆಕ್ ಪ್ರದೇಶ ಸಹ ವಾಯುಮಾಲಿನ್ಯಕ್ಕೆ ತುತ್ತಾಗುತ್ತಿದೆ. ಕೆಟ್ಟ ರಸ್ತೆಗಳಿಂದ ಏಳುವ ಧೂಳು ಪರಿಸರ ಮಾಲಿನ್ಯಕ್ಕೆ ತನ್ನ ಕೊಡುಗೆ ನೀಡುತ್ತಿದೆ.