‘ಅಪ್ಪಂಗೆ ಹುಟ್ಟಿದ್ರೆ..’ ಹಾಡಿನ ಬಗ್ಗೆ ತಕರಾರು: ಸುದೀಪ್ ಕೊಟ್ಟ ಸ್ಪಷ್ಟನೆ ಏನು?

‘ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ’ ಎಂಬ ಸಾಲು ‘ಮ್ಯಾಕ್ಸ್’ ಸಿನಿಮಾದ ಹಾಡಿನಲ್ಲಿ ಇದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಎದುರಾಯಿತು. ಅದಕ್ಕೆ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್​ನಲ್ಲಿ ನಡೆದ ಘಟನೆಗೂ ಈ ಸಿನಿಮಾದ ಸನ್ನಿವೇಶಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.