ತನ್ನ ಮೇಲೆ ಕೇಸ್ ಇತ್ತು ಎಂದು ಸಿದ್ದರಾಮಯ್ಯ ಸರ್ಕಾರ ಜನರಿಗೆ ಮತ್ತು ಮಾಧ್ಯಮಗಳಿಗೆ ಸುಳ್ಳು ಹೇಳುತ್ತಿದೆ, ಚಿಕ್ಕಬಳ್ಳಾಪುರದಲ್ಲಾಗಲೀ ಕೋಲಾರದಲ್ಲಾಗಲೀ ತನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ, ಕೇಸ್ ಇದ್ದ ಬಗ್ಗೆ ಸರ್ಕಾರ ದಾಖಲೆ ತೋರಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸವಾಲೆಸೆದರು.