ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ನಟ ದರ್ಶನ್ ಸಂಕಷ್ಟ ಎದುರಿಸುತ್ತಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇರುವ ಅವರ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಮಾತನಾಡಿದ್ದಾರೆ. ದರ್ಶನ್ ವ್ಯಕ್ತಿತ್ವದ ಬಗ್ಗೆ ನಿರ್ಮಾಪಕ ಶ್ರೀನಿವಾಸ್ ಈಗ ಅನಿಸಿಕೆ ತಿಳಿಸಿದ್ದಾರೆ. ‘ದರ್ಶನ್ ಜೊತೆ ನಾನು 20 ವರ್ಷದಿಂದ ಜರ್ನಿ ಮಾಡುತ್ತಾ ಇದ್ದೇನೆ. ಅವರು ತುಂಬ ಒಳ್ಳೆಯ ವ್ಯಕ್ತಿ. ಸಹವಾಸದಿಂದ ಸನ್ಯಾಸಿ ಕೆಟ್ಟ ಅಂತ ನಮ್ಮ ಹಳ್ಳಿಯಲ್ಲಿ ಹೇಳುತ್ತಾರೆ. ಆ ರೀತಿ, ಸುತ್ತಲೂ ಇರುವ ಜನರಿಂದ ದರ್ಶನ್ ಕೆಟ್ಟಿದ್ದಾರೆ. ಅವರ ಹೃದಯ ತುಂಬ ಒಳ್ಳೆಯದು. ಎಷ್ಟೋ ಸಲ ನಾನು ಅವರ ತೋಟಕ್ಕೆ ಹೋಗಿ ಊಟ ಮಾಡಿದ್ದೇನೆ. ಅವರ ಮನೆಗೆ ಹೋಗಿದ್ದೇನೆ. ಅಂಥವರು ಈ ರೀತಿ ಮಾಡಿದ್ದಾರೆ ಎಂದರೆ ಜೊತೆಯಲ್ಲಿ ಇರುವವರಿಂದ ಏನೋ ಮೋಸ ನಡೆದಿದೆ ಅಂತ ನನಗೆ ಅನಿಸುತ್ತದೆ. ದರ್ಶನ್ ತುಂಬ ಒಳ್ಳೆಯವರು. ಅವರು ಹೊರಗೆ ಬಂದೇ ಬರುತ್ತಾರೆ. ಸಹವಾಸದಿಂದ ಈ ರೀತಿ ಆಗಿದೆ. ನಿರ್ಮಾಪಕರು 150 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಅವರಿಗೆಲ್ಲ ಅನ್ಯಾಯ ಆಗಬಾರದು. ಕಾನೂನಿನ ಪ್ರಕಾರ ದರ್ಶನ್ ಅವರನ್ನು ಶೂಟಿಂಗ್ಗೆ ಕಳಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದಿದ್ದಾರೆ ನಿರ್ಮಾಪಕ ಶ್ರೀನಿವಾಸ್. ಪ್ರಕರಣದ ಎ1 ಆರೋಪಿಯಾದ ಪವಿತ್ರಾ ಗೌಡ ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.