ಕಾಂಗ್ರೆಸ್​ ಕಾರ್ಯಾಚರಣೆ ಬಗ್ಗೆ ಸಂಸದ ಉಮೇಶ್ ಜಾಧವ್ ಹೇಳಿದ್ದೇನು?

ಬಿಜೆಪಿ ಬಿಟ್ಟು ಹೋಗ್ತೇನೆ ಅಂತ ಯಾರು ಹೇಳಿಲ್ಲಾ ಅಂತ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಹೇಳಿದ್ದಾರೆ. ಕಲಬುರಗಿ ನಗರದಲ್ಲಿ ಮಾತನಾಡಿದ ಸಂಸದ ಡಾ. ಜಾಧವ್, ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬಂದಾಗ ಸಹಜವಾಗಿಯೇ ಕಾರ್ಯಕರ್ತರ ನಡುವೆ ಗೊಂದಲಗಳು ಇರುತ್ತವೆ. ಅದೆಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ ಅಂತ ಹೇಳಿದ್ರು. ಇನ್ನು ನನಗಂತು ಯಾರು ಕರೆದಿಲ್ಲಾ. ನಾನು ಪಕ್ಷ ಬಿಟ್ಟು ಹೋಗೋದಿಲ್ಲಾ. ಮುಂದಿನ ದಿನದಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತೆ ಅಂತ ಹೇಳಿದ್ದಾರೆ.