ರವಿಚಂದ್ರನ್ಗೆ ದಾಖಲೆಗಳನ್ನು ನೀಡಿದ್ರಾ ನಿರ್ಮಾಪಕ ಎಂಎನ್ ಕುಮಾರ್?

ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ನಡುವಿನ ಜಟಾಪಟಿ ಮುಂದುವರಿದಿದೆ. ಈ ಪ್ರಕರಣವನ್ನು ಕೋರ್ಟ್​​ನಲ್ಲಿ ಬಗೆಹರಿಸಿಕೊಳ್ಳಲು ಸುದೀಪ್ ಮುಂದಾಗಿದ್ದಾರೆ. ಇದಕ್ಕೆ ಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಕುಮಾರ್ ಅವರು ಇಂದು (ಜುಲೈ 19) ರವಿಚಂದ್ರನ್​ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಕುಮಾರ್ ಅವರು ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ಸುದೀಪ್ ವಿರುದ್ಧದ ದಾಖಲೆಗಳನ್ನು ರವಿಚಂದ್ರನ್​ಗೆ ಕುಮಾರ್ ನೀಡಿದರಾ ಎನ್ನುವ ಪ್ರಶ್ನೆ ಮೂಡಿದೆ.