ಕೆಂಡದಂಥ ಬಿಸಿಲಲ್ಲಿ ಪರದಾಡುತ್ತಿರುವ ಭಕ್ತರು

ಮುಳ್ಳಿನ ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ಕಡಿದು ರಸ್ತೆಗೆ ಅಡ್ಡ ಹಾಕಿ ಬಂದ್ ಮಾಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ದೇವರ ದರ್ಶನಕ್ಕೆ ಬೇರೆ ಬೇರೆ ಊರುಗಳಿಂದ ಭಕ್ತರು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಬಹಳ ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೇ ತಿಂಗಳು ಶುರುವಾಗಿದೆ ಮತ್ತು ಕಲಬರಗಿಯಲ್ಲಿ ತಾಪಮಾನ 44 ಡಿಗ್ರೀ ಸೆಲ್ಸಿಯಸ್​​ನಷ್ಟಿದೆ. ಕೆಂಡದಂಥ ಬಿಸಿಲು!