ದೆಹಲಿಯ ದ್ವಾರಕಾ ಸೆಕ್ಟರ್ 12ರ ಬಳಿ ಸರ್ವೀಸ್ ಲೇನ್ನ ಒಂದು ಭಾಗ ಕುಸಿದಿದ್ದು, ಪ್ರವಾಹದಂಥಾ ಹೊಂಡ ನಿರ್ಮಾಣವಾಗಿದ್ದು, ಕಾರೊಂದು ಮುಕ್ಕಾಲು ಭಾಗ ಅದರೊಳಗೆ ಹೊಕ್ಕಿರುವ ಘಟನೆ ನಡೆದಿದೆ. ಸ್ಥಳೀಯರು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.ಎಎಪಿಯ ಮಾಜಿ ಶಾಸಕ ಗುಲಾಬ್ ಸಿಂಗ್ ಯಾದವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು, ಜನರು ಐದು ವರ್ಷಗಳ ಕಾಲ ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.