ಪ್ರತಿದಿನ ಹಲವಾರು ಕಳ್ಳತನ ಮತ್ತು ದರೋಡೆ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಹೆಚ್ಚಿನವರು ಮೊಬೈಲ್, ಆಭರಣಗಳು, ಪರ್ಸ್ಗಳನ್ನು ಕಳೆದುಕೊಳ್ಳುತ್ತಾರೆ. ಚಾಲಾಕಿ ಕಳ್ಳನೊಬ್ಬ ಚಲಿಸುತ್ತಿರುವ ಬಸ್ ಒಳಗೆ ಬಸ್ ಕಂಡಕ್ಟರ್ ಮೊಬೈಲ್ನ್ನೇ ಕದ್ದಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಎಕ್ಸ್ನಲ್ಲಿ ಹಂಚಿಕೊಳ್ಳಲಾಗಿದೆ.ವೀಡಿಯೊದಲ್ಲಿ, ಬಸ್ ಕಂಡಕ್ಟರ್ ಪ್ರಯಾಣಿಕರೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು ಮತ್ತು ಒಬ್ಬ ವ್ಯಕ್ತಿ ಕಂಡಕ್ಟರ್ ಹಿಂದೆ ನಿಂತಿದ್ದಾರೆ.