ವಿಜ್ಞಾನಿಗಳಿಂದಲೂ ಮೆಚ್ಚುಗೆ ಪಡೆದ ‘ದಿ ವ್ಯಾಕ್ಸಿನ್​ ವಾರ್​’; ಖುಷಿ ಹಂಚಿಕೊಂಡ ಪಲ್ಲವಿ ಜೋಶಿ

ಬಹುನಿರೀಕ್ಷಿತ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್​ 28ರಂದು ಈ ಚಿತ್ರ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ ಕೂಡ ಒಂದು ಪಾತ್ರ ಮಾಡಿದ್ದಾರೆ. ಅನೇಕ ನಗರಗಳಿಗೆ ತೆರಳಿ ಅವರು ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಪಲ್ಲವಿ ಜೋಶಿ ಅವರು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಈಗಾಗಲೇ ಹಲವು ದೇಶಗಳಲ್ಲಿ ಪ್ರದರ್ಶನ ಕಂಡಿದೆ. ಅಲ್ಲಿ ಸಿಕ್ಕಂತಹ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಪಲ್ಲವಿ ಜೋಶಿ ವಿವರಿಸಿದ್ದಾರೆ. ಸಿನಿಮಾ ನೋಡಿದ ವಿಜ್ಞಾನಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅದು ಪಲ್ಲವಿ ಜೋಶಿಗೆ ಖುಷಿ ನೀಡಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದಲ್ಲೂ ಪಲ್ಲವಿ ಅವರು ಒಂದು ಮುಖ್ಯ ಪಾತ್ರ ಮಾಡಿದ್ದರು. ಆ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾಗೆ ಅವರು ನಿರ್ಮಾಪಕಿ ಕೂಡ ಹೌದು. ಈ ಚಿತ್ರದ ಹಿಂದಿನ ಅನೇಕ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ.