ರಾಹುಲ್ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸುವಾಗ ಅವರ ಹಿಂದೆ ಅಥವಾ ಅಕ್ಕಪಕ್ಕದಲ್ಲಿ ಕಾಣುವ ಮಹಿಳೆಯೊಬ್ಬರು ‘ಯುವನಾಯಕ ರಾಹುಲ್ ಜಾರಕಿಹೊಳಿ ಅವರಿಗೆ....’ ಮತ್ತು ‘ಭಾವಿ ಶಾಸಕ ರಾಹುಲ್ ಜಾರಕಿಹೊಳಿ ಅವರಿಗೆ ಜಯವಾಗಲಿ,’ ಅಂತ ಗಂಟಲು ಹರಿಯುವ ಹಾಗೆ ಕಿರುಚುತ್ತಾರೆ. ರಾಜೀವ್ ಗಾಂಧಿಯವರ ಮಕ್ಕಳ ಹೆಸರನ್ನೇ ಸತೀಶ್ ತಮ್ಮ ಮಕ್ಕಳಿಗೆ ಇಟ್ಟಿರೋದು ಕಾಕತಾಳೀಯವಾಗಿಲಾರದು!