ಜೈಲಿನಲ್ಲಿರುವ ದರ್ಶನ್​ ನೋಡಲು ಅತ್ತಿಗೆ ಜೊತೆ ಬಂದ ದಿನಕರ್ ತೂಗುದೀಪ

ನ್ಯಾಯಾಂಗ ಬಂಧನದಲ್ಲಿ ಇರುವ ನಟ ದರ್ಶನ್​ ಅವರ ಪರವಾಗಿ ಕುಟುಂಬದವರು ಕಾನೂನಿನ ಹೋರಾಟ ನಡೆಸುತ್ತಿದ್ದಾರೆ. ರೇಣುಕಾ ಸ್ವಾಮಿ ಮರ್ಡರ್​ ಕೇಸ್​ನಲ್ಲಿ ಪ್ರಮುಖ ಆರೋಪಿ ಆಗಿರುವ ದರ್ಶನ್​ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಆರಂಭದಲ್ಲಿ ಅವರು ಅರೆಸ್ಟ್​ ಆದಾಗ ಕುಟುಂಬದವರು ಕೂಡಲೇ ಬಂದಿರಲಿಲ್ಲ. ನಂತರ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್​ ತೂಗುದೀಪ, ತಾಯಿ ಮೀನಾ ಮುಂತಾದವರು ಬಂದು ದರ್ಶನ್​ಗೆ ಧೈರ್ಯ ತುಂಬಿದರು. ಆರೋಪಿಯ ಭೇಟಿ ಮಾಡಲು ಕುಟುಂಬದವರಿಗೆ ಹಾಗೂ ಆಪ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇಂದು (ಜುಲೈ 15) ದಿನಕರ್​ ತೂಗುದೀಪ ಹಾಗೂ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಆದಷ್ಟು ಬೇಗ ಅವರಿಗೆ ಜಾಮೀನು ಸಿಗಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಪವಿತ್ರಾ ಗೌಡ ಹಾಗೂ ಅವರ ಸಹಚರರು ಕೂಡ ಜೈಲಿನಲ್ಲಿದ್ದಾರೆ.