ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿ ಎರಡು ವಿಧಾನಗಳನ್ನು ಅನುಸರಿಸುತ್ತದೆ, ಸರ್ವಸಮ್ಮತಿಯ ಆಯ್ಕೆ ಮತ್ತು ಚುನಾವಣೆ ಎಂದು ಅಶೋಕ ಹೇಳಿದರು. ಯಾವುದಕ್ಕೂ ಶಿವರಾಜ್ ಸಿಂಗ್ ಚೌಹಾನ್ ಅವರ ನಿರ್ಣಯವೇ ಅಂತಿಮವಾಗಿರುತ್ತದೆ, ಅವರು ಆಯ್ಕೆ ಮಾಡಿ ಅನುಮೋದನೆಗಾಗಿ ವರಿಷ್ಠರಿಗೆ ಕಳಿಸುತ್ತಾರೆ, ವರಿಷ್ಠರು ತೆಗೆದುಕೊಳ್ಳುವ ನಿರ್ಣಯವನ್ನು ಶಿರಸಾವಹಿಸಿ ಪಾಲಿಸುತ್ತೇವೆ ಎಂದು ಅಶೋಕ ಹೇಳಿದರು.