ಹಾವೇರಿ: ಬಕ್ರೀದ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ನಡೆದ ಆಚರಣೆಯ ನಂತರ ಅಂಜುಮನ್ ಕಮಿಟಿ ಲೆಕ್ಕಪತ್ರ ನಿರ್ವಹಣೆ ವಿಚಾರವಾಗಿ ಮುಸ್ಲಿಂ ಯುವಕರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಈದ್ಗಾ ಮೈದಾನದ ನಿರ್ವಹಣೆಗಾಗಿ ವಂತಿಕೆ ಸಂಗ್ರಹ ವೇಳೆ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಓರ್ವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.